Engineer's Day Celebration at GSIT, Karwar today.. Chief Guest Smt Vijaya Hegde Environmental Officer, KSPCB, Karwar and Guest of honor Prof Nagraj Joshi Consulting Civil Engineer, Karwar. Invocation by Prof Abhinandan, MC Ms Pooja Naik, Mr Ajoy DSilva and Ms Mafita Cardoz, Vote of thanks by Ms Chaliya students of GSIT..
ಕಾರವಾರ: ಪರಿಸರ ವಿಜ್ಞಾನ ವಿಭಾಗದಲ್ಲಿ ಸಿವಿಲ್ ಇಂಜಿನಿಯರಗಳಿಗೆ, ಹೈಡ್ರೊ ಇನಫರ್ಮಾಟಿಕ್ಸ್ ವಿಭಾಗದಲ್ಲಿ ಸಿವಿಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೂ ಹಾಗೂ ಪರಿಸರ ಮಾಲಿನ್ಯ ನಿರ್ವಹಣೆಯಲ್ಲಿ ಎಲ್ಲ ವಿಭಾಗದ ಇಂಜಿನೀರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಹೊಸ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಎಂದು ಕಾರವಾರ ವಿಭಾಗದ ಪರಿಸರ ಅಧಿಕಾರಿ ಶ್ರೀಮತಿ ವಿಜಯಾ ಹೆಗಡೆರವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು, ಬುಧವಾರ ದಿನಾಂಕ ೧೮-೦೯-೨೦೧೯ರಂದು ನಗರದ ಗಿರಿಜಾಬಾಯಿ ಸೈಲ್ ತಾಂತ್ರಿಕ ಮಹಾವಿದ್ಯಾಲಯ ಮಾಜಾಳಿ ಕಾರವಾರದಲ್ಲಿ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯರವರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸುವ ಇಂಜಿನೀಯರ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು ಪರಿಸರ ಹಾನಿ ಕುರಿತಾದ ನಿರಂತರ ಅಧ್ಯಯನ ಮಾಡಿ ವರದಿ ಸಲ್ಲಿಸುವುದರ ಜೊತೆಗೆ ಸಾರ್ವಜನಿಕ ಅಭಿಪ್ರಾಯ ಪಡೆಯುವುದು ಅವಶ್ಯವಾಗಿದೆ.
ಇನೋರ್ವ ಅತಿಥಿಯಾಗಿ ಆಗಮಿಸಿದ ಕಾರವಾರದ ರೋಟರಿ ಸಂಸ್ಥೆ ಅಧ್ಯಕ್ಷರಾದ ಶ್ರೀ ನಾಗರಾಜ ಜೋಶಿರವರು ಸರ್. ಎಂ ವಿಶ್ವೇಶ್ವರಯ್ಯರವರು ಕೇವಲ ಇಂಜಿನೀಯರ್ ಅಷ್ಟೆ ಆಗಿರದೇ ಅವರಲ್ಲಿ ದೇಶಾಭಿಮಾನ, ಸಮಾಜಸೇವೆ ಮತ್ತು ಕಠಿಣಪರಿಶ್ರಮದಿಂದ ಅವರು ನಮಗೆ ಧೀಮಂತ ವ್ಯಕ್ತಿಯಾಗಿ ಕಾಣುತ್ತಾರೆ.
ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ಡಿ ಮಾನೆರವರು, ಸರ್. ಎಂ ವಿಶ್ವೇಶ್ವರಯ್ಯರವರ ಸರಳ ಜೀವನ, ದೇಶಪ್ರೇಮ ಮತ್ತು ಕಠಿಣ ಪರಿಶ್ರಮ ಇವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಅಜೊಯ್ ಡಿಸಿಲ್ವಾ ವಿಶ್ವೇಶ್ವರಯ್ಯರವರ ಕಠಿಣ ಪರಿಶ್ರಮ ನುಡಿಗಳ ಬಗ್ಗೆ ವಿವರಿಸಿ ಮಾತನಾಡಿದನು.
ಡಾ.ವಿರೇಶ ಎಂ. ರವರು ಅತಿಥಿಗಳನ್ನು ಪರಿಚಯಿಸಿದರು, ಪ್ರೊ. ಅಭಿನಂದನ ಬಾಂದೇಕರ ರವರು ಪ್ರಾರ್ಥಿಸಿದರು, ಗ್ರಂಥಪಾಲಕ ಕರಿಸಿದ್ದಪ್ಪ ಕಡ್ಡಿಪೂಜಾರ ಕಾರ್ಯಕ್ರಮ ಸಂಯೋಜಿಸಿದರು.
ಕಾಲೇಜಿನ ಅಡಳಿತಾಧಿಕಾರಿ ವಿಲಿಯಮ್ ಫರ್ನಾಡೀಸ್ ಹಾಗೂ ಪಿ. ಜಿ. ನಾಯಕ್ ಉಪಸ್ಥಿತರಿದ್ದರು.
ಕಾಲೇಜಿನ ಸಿಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು, ಮಫಿತಾ ಕಾರ್ಡೋಜ್ ಮತ್ತು ಪೂಜಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಚಲಿಯಾ ಫಲ್ ದೇಸಾಯಿ ವಂದಿಸಿದರು.